ಅಂತರ್ಜಾಲವನ್ನು ಬಳಸಿಕೊಂಡು ನಡೆಸುವ ಚಾಟಿಂಗ್ ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಆನ್ ಲೈನ್ ಕ್ರೀಡೆಗಳನ್ನು ಆಡುವ ಸಂದರ್ಭದಲ್ಲಿ, ಮೆಸೇಜ್ ಬೋರ್ಡುಗಳಲ್ಲಿ ಮತ್ತು ಇನ್ನಿತರ ಅಂತರ್ಜಾಲ ತಾಣ ಅಥವಾ ವೇದಿಕೆಗಳಲ್ಲಿ ಮತ್ತು ಮೊಬೈಲ್ ಬಳಕೆಯಲ್ಲಿ ಆಗುವ ಯಾವುದೇ ರೀತಿಯ ಶೋಷಣೆಯನ್ನು ಅಂತರ್ಜಾಲ ಶೋಷಣೆ ಎಂದು ಕರೆಯಲಾಗುತ್ತದೆ. ಈ ರೀತಿಯ ಶೋಷಣೆಯನ್ನು ಎದುರಿಸುವಲ್ಲಿ ತೆಗೆದುಕೊಳ್ಳಬೇಕಾದ ಮೊತ್ತಮೊದಲ ಕ್ರಮವೆಂದರೆ ಸಂಬಂಧಿಸಿದ ಜಾಲತಾಣ/ಅಪ್ಲಿಕೇಶನ್ನಿನ ಅಡ್ಮಿನಿಸ್ಟ್ರೇಟರ್ ರನ್ನು ಸಂಪರ್ಕಿಸುವುದು. ಅವರ ಮೂಲಕ ನಿಮ್ಮ ದೂರಿಗೆ ಪರಿಹಾರ ದೊರಕದಿದ್ದ ಸಂದರ್ಭದಲ್ಲಿ ನಿಮಗಾಗಿರುವ ಶೋಷಣೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಸ್ಥಳೀಯ ಪೋಲೀಸ್ ಠಾಣೆ ಅಥವಾ ಸೈಬರ್ ತನಿಖಾ ದಳಕ್ಕೆ ಕ್ರಿಮಿನಲ್ ದೂರನ್ನು ನೀಡಬಹುದಾಗಿದೆ.