ಏಳು ದಿನಗಳ ಕಾಲಕ್ಕೂ ಹೆಚ್ಚಿನ ವಿಳಂಬವಾಗಿದ್ದಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನಿಸುತ್ತದೆ. ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿಯೇ ಬ್ಯಾಂಕುಗಳು ಗ್ರಾಹಕರ ಹೊಣೆಗಾರಿಕೆ ಕುರಿತ ತಮ್ಮ ನೀತಿಯನ್ನು ವಿವರವಾಗಿ ತಿಳಿಸತಕ್ಕದ್ದು. ವ್ಯಾಪಕ ಪ್ರಚಾರಕ್ಕಾಗಿ ಬ್ಯಾಂಕುಗಳು ತಮ್ಮ ನೀತಿಯನ್ನು ಸಾರ್ವಜನಿಕ ವಲಯದಲ್ಲಿ ಪ್ರಚುರಗೊಳಿಸಬೇಕು. ಬ್ಯಾಂಕಿನ ಪ್ರಸ್ತುತ ಗ್ರಾಹಕರಿಗೆ ವೈಯುಕ್ತಿಕವಾಗಿ ಬ್ಯಾಂಕಿನ ನೀತಿಯನ್ನು ತಿಳಿಸಬೇಕು.Read more