ನಿಂದನೀಯ ಭಾಷೆಯ ಬಳಕೆ ಮತ್ತು ಪೋಟೋ ಮಾರ್ಪಾಡು

ಕೊನೆಯ ಅಪ್ಡೇಟ್ Jul 22, 2022

ಅಂತರ್ಜಾಲ ಸೌಲಭ್ಯಗಳನ್ನು ಬಳಸುವಾಗ ನಿಮ್ಮನ್ನು ಕುರಿತು ಯಾರಾದರೂ ನಿಂದನೀಯ ಭಾಷೆ ಬಳಕೆ ಮಾಡಿದಲ್ಲಿ ಅಥವಾ ನಿಮ್ಮ ಭಾವಚಿತ್ರವನ್ನು ನಿಂದನಾತ್ಮಕ ಅಥವಾ ಲೈಂಗಿಕವಾಗಿ ಪ್ರಚೋದನಕಾರಿಯಾದ ಯಾವುದೇ ವಿಷಯದೊಡನೆ ಉಪಯೋಗಿಸಿದ್ದಲ್ಲಿ, ಅಂತಹ ವ್ಯಕ್ತಿಯು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹನು. ಅಂತಹ ನಿಂದನಾತ್ಮಕ ಭಾಷೆ ಅಥವಾ ಚಿತ್ರ ಅಥವಾ ವಿಡಿಯೋ:-

  • ನಿಮ್ಮನ್ನು ಕುರಿತು ಲೈಂಗಿಕಾಸಕ್ತಿಯನ್ನು ಕೆರಳಿಸುವಂತಿರಬೇಕು ಅಥವಾ ನಿಮ್ಮನ್ನು ಕುರಿತು ಲೈಂಗಿಕ ಭಾವನೆಗಳನ್ನು ಉದ್ರೇಕಿಸುವಂತಿರಬೇಕು.
  • ಲೈಂಗಿಕ ವಿಚಾರಗಳಲ್ಲಿ ಮಿತಿಮೀರಿದ ಆಸಕ್ತಿಯನ್ನು ವ್ಯಕ್ತಪಡಿಸಬೇಕು.
  • ನೀವು ಅದನ್ನು ಅಂತರ್ಜಾಲದಲ್ಲಿ ಅದನ್ನು ಓದಿದಾಗ ಅಥವಾ ನೋಡಿದಾಗ ನಿಮ್ಮನ್ನು ನೀತಿಭ್ರಷ್ಟ ಅಥವಾ ಲಂಪಟರನ್ನಾಗಿ ಮಾಡುವಂತಿರಬೇಕು. ಉದಾಹರಣೆಗೆ: ಅಶ್ಲೀಲ ಸಾಹಿತ್ಯ ಅಥವಾ ವಿಡಿಯೋ.

ಈ ಅಪರಾಧಕ್ಕಾಗಿ ಮೊದಲ ಬಾರಿ ತಪ್ಪಿತಸ್ಥನೆಂದು ಕಂಡುಬಂದಾಗ ಅಪರಾದಿಯು ಮೂರು ವರ್ಷಗಳ ಕಾರಾಗೃಹ ವಾಸ ಮತ್ತು ಐದು ಲಕ್ಷ ರೂಪಾಯಿಗಳವರೆಗೆ ಜುಲ್ಮಾನೆ ತೆರುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಎರಡನೇ ಬಾರಿ ತಪ್ಪಿತಸ್ಥನೆಂದು ತೀರ್ಮಾನಿಸಿದಾಗ, ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು 10 ಲಕ್ಷ
ರೂಪಾಯಿಗಳವರೆಗೆ ದಂಡವನ್ನು ತೆರಬೇಕಾಗುತ್ತದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.