This post is also available in: English (ಆಂಗ್ಲ)
ವಿಶೇಷ ವಿವಾಹ ಅಧಿನಿಯಮದ 4ನೇ ಪ್ರಕರಣದಲ್ಲಿ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸುವ ವಿವಾಹಕ್ಕೆ ಯಾವುದೇ ವ್ಯಕ್ತಿಯು ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ಉದ್ದೇಶಿತ ವಿವಾಹ ಕುರಿತು ನೋಟೀಸ್ ಪ್ರಕಟಿಸಿದ 30 ದಿನಗಳೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು. ಹೀಗೆ ಆಕ್ಷೇಪಣೆಯನ್ನು ಸ್ವೀಕರಿಸಿದ ಪ್ರಕರಣಗಳಲ್ಲಿ ವಿವಾಹ ಅಧಿಕಾರಿಯು ಆಕ್ಷೇಪಣೆಗೆ ಸಮಜಾಯಿಷಿ ನೀಡುವವರೆಗೆ ವಿವಾಹ ನೆರವೇರಲು ಅನುಮತಿ ನೀಡುವುದಿಲ್ಲ. ಆಕ್ಷೇಪಣೆಯನ್ನು ಸ್ವೀಕರಿಸಿದ 30 ದಿನಗಳ ಅವಧಿಯೊಳಗೆ ಅದನ್ನು ಪುರಸ್ಕರಿಸುವುದು ಅಥವಾ ತಿರಸ್ಕರಿಸುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಆಕ್ಷೇಪಣೆಯನ್ನು ಪುರಸ್ಕರಿಸಿದಲ್ಲಿ, ವಿವಾಹವನ್ನು ನೆರವೇರಿಸಲಾಗುವುದಿಲ್ಲ.
Please login or Register to submit your answer