• English (ಆಂಗ್ಲ)
  • ಕನ್ನಡ
  
NyaayaNyaayaNyaayaNyaaya
  • ವಿಭಾಗಗಳು
    • ತಾರತಮ್ಯ
      • LGBTQ+ ಆರೋಗ್ಯ
    • ಪೊಲೀಸ್ ಮತ್ತು ನ್ಯಾಯಾಲಯಗಳು
      • ಎಫ್ಐಆರ್
      • ಸಂಚಾರ ದಂಡ
    • ಮದುವೆ ಮತ್ತು ವಿಚ್ ೇದನ
      • ಅಂತರ್ ಧಾರ್ಮಿಕ ವಿವಾಹ
    • ಸರ್ಕಾರ ಮತ್ತು ರಾಜಕೀಯ
      • ಮಾಹಿತಿಯ ಹಕ್ಕು
    • ಹಣ ಮತ್ತು ಆಸ್ತಿ
      • ಬಾಡಿಗೆ
    • ಹಿಂಸೆ ಮತ್ತು ನಿಂದನೆ
      • ಆನ್‌ಲೈನ್ ನಿಂದನೆ
  • ಮುಖಪುಟ

category

Home ಹಣ ಮತ್ತು ಆಸ್ತಿ Archive by category "ಆನ್ ಲೈನ್ ವಂಚನೆ"

ಬ್ಯಾಂಕ್ ನೀತಿ

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ಏಳು ದಿನಗಳ ಕಾಲಕ್ಕೂ ಹೆಚ್ಚಿನ ವಿಳಂಬವಾಗಿದ್ದಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನಿಸುತ್ತದೆ. ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿಯೇ ಬ್ಯಾಂಕುಗಳು ಗ್ರಾಹಕರ ಹೊಣೆಗಾರಿಕೆ ಕುರಿತ ತಮ್ಮ ನೀತಿಯನ್ನು ವಿವರವಾಗಿ ತಿಳಿಸತಕ್ಕದ್ದು. ವ್ಯಾಪಕ ಪ್ರಚಾರಕ್ಕಾಗಿ ಬ್ಯಾಂಕುಗಳು ತಮ್ಮ ನೀತಿಯನ್ನು ಸಾರ್ವಜನಿಕ ವಲಯದಲ್ಲಿ ಪ್ರಚುರಗೊಳಿಸಬೇಕು. ಬ್ಯಾಂಕಿನ ಪ್ರಸ್ತುತ ಗ್ರಾಹಕರಿಗೆ ವೈಯುಕ್ತಿಕವಾಗಿ ಬ್ಯಾಂಕಿನ ನೀತಿಯನ್ನು ತಿಳಿಸಬೇಕು.Read more

ಗ್ರಾಹಕರ ಹೊಣೆಗಾರಿಕೆ

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ಗ್ರಾಹಕರು ಹಣ ಪಾವತಿಗೆ ಸಂಬಂಧಿಸಿದ ಪಾಸ್ ವರ್ಡ್ ಇತ್ಯಾದಿ ಗುಪ್ತ ಸಂಕೇತಗಳನ್ನು ರಹಸ್ಯವಾಗಿಡತಕ್ಕದ್ದು ಮತ್ತು ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳತಕ್ಕದ್ದಲ್ಲ. ಗ್ರಾಹಕರು ಈ ರೀತಿಯ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದಲ್ಲಿ, ಅಜಾಗರೂಕತೆಯ ಕಾರಣದಿಂದಾಗಿ ಅವರ ಹೊಣೆಗಾರಿಕೆ ಹೆಚ್ಚುತ್ತದೆ. ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಹೊಣೆಗಾರಿಕೆಯನ್ನು (ಯಾವುದೇ ಪ್ರಮಾಣದವರೆಗೂ) ನಿರ್ಧರಿಸುವುದು ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ. ಬ್ಯಾಂಕುಗಳು ತಮ್ಮ ವಿವೇಚನೆಯನ್ನು ಚಲಾಯಿಸಿ, ಗ್ರಾಹಕರನ್ನು ಅವರ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ಮುಕ್ತರಾಗಿಸಬಹುದಾಗಿದೆ. ಗ್ರಾಹಕರ ಅಜಾಗರೂಕತೆಯಿಂದಲೇ ಅವರು ವಂಚನೆಗೊಳಗಾಗಿದ್ದರೂ ಸಹ ಬ್ಯಾಂಕು ಈ ಕ್ರಮ ಕೈಗೊಳ್ಳಬಹುದಾಗಿದೆ.Read more

ಆನ್ ಲೈನ್ ಬ್ಯಾಂಕ್ ವಂಚನೆ ಸಂಬಂಧಿಸಿದಂತೆ ದೂರು ಸಲ್ಲಿಸುವುದು

By Nyaaya | ಆನ್ ಲೈನ್ ವಂಚನೆ, ಹಣ ಮತ್ತು ಆಸ್ತಿ | 0 comment | 19 September, 2020 | 1

ಪೋಲೀಸ್ ಸ್ಟೇಷನ್: ಆನ್ ಲೈನ್ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಲ್ಲಿ, ನಿಮಗೆ ಎಫ್ಐಆರ್ ದಾಖಲಿಸುವಂತೆ ತಿಳಿಸಲಾಗುವುದು. ನಿಮಗಾದ ಆನ್ ಲೈನ್ ವಂಚನೆ ಕುರಿತು ಎಲ್ಲ ಮಾಹಿತಿಯನ್ನು ನೀವು ಈ ಸಂದರ್ಭದಲ್ಲಿ ಒದಗಿಸತಕ್ಕದ್ದು. ಆನ್ ಲೈನ್ ದೂರು: ಪೋಲೀಸ್ ಸ್ಟೇಷನ್ನ ಸೈಬರ್ ಕ್ರೈಮ್ ಶಾಖೆಯಲ್ಲಿ ಎಫ್ಐಆರ್ ದಾಖಲಿಸುವುದಲ್ಲದೆ, ನೀವು ಆನ್ ಲೈನ್ ನಲ್ಲೂ ಕೂಡ ಕೇಂದ್ರ ಗೃಹಖಾತೆಯ ಆನ್ ಲೈನ್ ಅಪರಾಧ ಮಾಹಿತಿ ಜಾಲತಾಣದಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ವಂಚನೆಯ ಘಟನೆ ಕುರಿತುRead more

ಅನಧಿಕೃತ ವ್ಯವಹಾರಗಳ ಕುರಿತು ಬ್ಯಾಂಕಿಗೆ ಮಾಹಿತಿ ನೀಡುವಲ್ಲಿ ಗ್ರಾಹಕರ ಹೊಣೆಗಾರಿಕೆ

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ತಮ್ಮ ಖಾತೆಯಲ್ಲಿ ಯಾವುದೇ ಅನಧಿಕೃತ ವ್ಯವಹಾರ ಕುರಿತು ತಕ್ಷಣವೇ ಅಥವಾ ಸಾಧ್ಯವಾದಷ್ಟು ಬೇಗ ಬ್ಯಾಂಕಿಗೆ ಮಾಹಿತಿ ನೀಡುವಂತೆ ಗ್ರಾಹಕರಿಗೆ ಸಲಹೆ ನೀಡತಕ್ಕದ್ದು. ಈ ರೀತಿ ಮಾಹಿತಿ ನೀಡಲು ತಡಮಾಡಿದಷ್ಟು ಬ್ಯಾಂಕ್/ಗ್ರಾಹಕರಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಸ್ ಎಂ ಎಸ್ ಕಳುಹಿಸಿದ ಸಮಯ ಮತ್ತು ಗ್ರಾಹಕರಿಂದ ಪ್ರತ್ಯುತ್ತರ/ಎಸ್ ಎಂಎಸ್ ಬಂದ ಸಮಯವನ್ನು ಬ್ಯಾಂಕ್ ದಾಖಲು ಮಾಡಿಕೊಂಡಿರುತ್ತದೆ. ಗ್ರಾಹಕರ ಹೊಣೆಗಾರಿಕೆಯನ್ನು ನಿರ್ಧರಿಸುವ ಸಲುವಾಗಿ ಹೀಗೆ ಮಾಡಲಾಗುತ್ತದೆ.Read more

ಅನಧಿಕೃತ ವ್ಯವಹಾರವನ್ನು ರದ್ದು ಮಾಡುವುದು

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ಅನಧಿಕೃತ ವ್ಯವಹಾರ ಕುರಿತು ಗ್ರಾಹಕರಿಂದ ಮಾಹಿತಿ ಬಂದ 10 ದಿನಗಳ ಅವಧಿಯೊಳಗೆ ಬ್ಯಾಂಕು ಆ ವ್ಯವಹಾರವನ್ನು ರದ್ದುಗೊಳಿಸಿ, ಸದರಿ ಅನಧಿಕೃತ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಒಳಗೊಂಡ ಹಣವನ್ನು ಗ್ರಾಹಕರ ಖಾತೆಗೆ ಪುನ: ಜಮೆ ಮಾಡುತ್ತದೆ. ಈ ಕ್ರಮ ಕೈಗೊಳ್ಳಲು ಬ್ಯಾಂಕುಗಳು ವಿಮಾ ಹಣ ಹೊಂದಾಣಿಕೆಯಾಗುವವರೆಗೂ ಕಾಯಬಾರದು. ಅನಧಿಕೃತ ವ್ಯವಹಾರ ನಡೆದ ದಿನದಂದು ಕಳೆದುಕೊಂಡ ಹಣದ ಮೊತ್ತವನ್ನು ಬ್ಯಾಂಕ್ ಜಮಾ ಮಾಡತಕ್ಕದ್ದು.Read more

ಗ್ರಾಹಕರ ದೂರು ಪರಿಹಾರ ವೇದಿಕೆಯಲ್ಲಿ ಪ್ರಕರಣ ದಾಖಲು ಮಾಡುವುದು

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ಗ್ರಾಹಕರ ದೂರು ಪರಿಹಾರ ವೇದಿಕೆಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಎರಡು ಅಂಶಗಳ ಆಧಾರದ ಮೇಲೆ ನೀವು ಈ ವೇದಿಕೆಗಳಿಗೆ ದೂರು ಸಲ್ಲಿಸಬಹುದಾಗಿದೆ. 1.ನೀವು ಕಳೆದುಕೊಂಡ ಹಣದ ಮೊತ್ತ: ಜಿಲ್ಲಾ ವೇದಿಕೆ: ರೂ.20 ಲಕ್ಷದವರೆಗೆ ರಾಜ್ಯ ಆಯೋಗ: ರೂ. 20 ಲಕ್ಷದಿಂದ ರೂ. 1 ಕೋಟಿ ರಾಷ್ಟ್ರೀಯ ಆಯೋಗ: ರೂ. 1 ಕೋಟಿಗೂ ಮೇಲ್ಪಟ್ಟು 2.ನೀವು ಹಣ ಕಳೆದುಕೊಂಡ ಸ್ಥಳ: ಹಣವನ್ನು ಕಳೆದುಕೊಂಡ ಸ್ಥಳದಲ್ಲಿ ಅಥವಾ ಎದುರುದಾರರು (ಎಂದರೆ, ಬ್ಯಾಂಕ್) ತನ್ನ ವ್ಯವಹಾರವನ್ನು ನಡೆಸುವRead more

ಆನ್ ಲೈನ್ ಬ್ಯಾಂಕ್ ವಂಚನೆ ತಡೆಯುವಲ್ಲಿ ಬ್ಯಾಂಕ್ ಗಳ ಹೊಣೆಗಾರಿಕೆ

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 2

ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ ಎಂ ಎಸ್ ಸೇವೆಗಳಿಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಬೇಕು. ಸೇವೆಗಳು ಲಭ್ಯವಿರುವ ಸಂದರ್ಭಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಗಳಿಗೂ ಸಹ ನೋಂದಣಿ ಮಾಡಿಕೊಳ್ಳುವಂತೆ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಬೇಕು. ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಸ್ಎಂಎಸ್ ಅಲರ್ಟ್ ಗಳನ್ನು ಬ್ಯಾಂಕುಗಳು ಕಡ್ಡಾಯವಾಗಿ ಕಳುಹಿಸತಕ್ಕದ್ದು. ಇ-ಮೇಲ್ ಅಲರ್ಟ್ ಗಳು ಕಡ್ಡಾಯವೇನಲ್ಲ. ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸೇವೆಗಳನ್ನು ಅನಧಿಕೃತವಾಗಿ ಬಳಕೆ ಮಾಡಿರುವುದರRead more

ಬ್ಯಾಂಕಿಂಗ್ ಒಂಬಡ್ಸ್ ಮನ್ ಗೆ ದೂರು ಸಲ್ಲಿಸುವುದು

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 2

ಬ್ಯಾಂಕ್ ನಿಮಗೆ ನೀಡಿದ ಪರಿಹಾರ ತೃಪ್ತಿಕರವಾಗಿ ಕಂಡುಬರದಿದ್ದಲ್ಲಿ ಮತ್ತು ನೀವು ದೂರನ್ನು ಕುರಿತು ಹೆಚ್ಚಿನ ವಿಚಾರಣೆಯನ್ನು ಬಯಸಿದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿರುವ ಬ್ಯಾಂಕಿಂಗ್ ಒಂಬಡ್ಸ್ ಮನ್ ಮುಂದೆ ದೂರು ಸಲ್ಲಿಸಲು ಅವಕಾಶವಿದೆ. ಈ ಒಂಬಡ್ಸ್ ಮನ್ ವ್ಯವಸ್ಥೆಯನ್ನು ಬ್ಯಾಂಕಿಂಗ್ ಒಂಬಡ್ಸ್ ಮನ್ ಯೋಜನೆ, 2006 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಬ್ಯಾಂಕಿನ ಶಾಖೆಯು ಯಾವ ಒಂಬಡ್ಸ್ ಮನ್ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆ ಎಂಬ ಮಾಹಿತಿಯನ್ನು ಪ್ರತಿ ಬ್ಯಾಂಕ್ ತನ್ನ ಶಾಖೆಯಲ್ಲಿ ಪ್ರದರ್ಶಿಸತಕ್ಕದ್ದು. ಈ ಲಿಂಕ್ ಮೂಲಕ ಸಂಬಂಧಿಸಿದRead more

ಬ್ಯಾಂಕಿನಲ್ಲಿ ದೂರು ದಾಖಲಿಸುವುದು

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಇಂತಹ ಉದ್ದೇಶಕ್ಕಾಗಿಯೇ ಮೀಸಲಾದ ಸಿಬ್ಬಂದಿಯನ್ನು ಹೊಂದಿರುತ್ತವೆ. ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡಿನ ಹಿಂಭಾಗದಲ್ಲಿ ಹಾಗೂ ಬ್ಯಾಂಕಿನ ವೆಬ್ ಸೈಟಿನಲ್ಲಿ ಈ ಸಿಬ್ಬಂದಿಯ ಸಂಪರ್ಕ ಮಾಹಿತಿ ಲಭ್ಯವಾಗುತ್ತದೆ. ಹೆಲ್ಪ್ ಡೆಸ್ಕ್ ಗಳ ದೂರವಾಣಿ ಸಂಖ್ಯೆಗಳನ್ನು ಎಟಿಎಂ ಯಂತ್ರದ ಮೇಲೆಯೂ ನಮೂದಿಸಲಾಗಿರುತ್ತದೆ. ನೀವು ಆನ್ ಲೈನ್ ವ್ಯವಹಾರಲ್ಲಿ ಹಣ ಕಳೆದುಕೊಂಡಲ್ಲಿ ತಕ್ಷಣವೇ ನಿಮ್ಮ ಬ್ಯಾಂಕನ್ನು ದೂರವಾಣಿ (ಆದ್ಯತೆ ಮೇರೆಗೆ) ಅಥವಾ ಇ-ಮೇಲ್ ಮೂಲಕ ಸಂಪರ್ಕಿಸತಕ್ಕದ್ದು. ನಿಮ್ಮ ದೂರು ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಮರೆಯಬೇಡಿ. ದೂರನ್ನು ಕುರಿತುRead more

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ಕಾಪಾಡಲು ಗ್ರಾಹಕ ಹೊಂದಿರುವ ಹಕ್ಕು

By Nyaaya | ಆನ್ ಲೈನ್ ವಂಚನೆ | 0 comment | 19 September, 2020 | 1

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಬ್ಯಾಂಕಿನ ಗ್ರಾಹಕ ಈ ಕೆಳಕಂಡ ಹಕ್ಕುಗಳನ್ನು ಹೊಂದಿರುತ್ತಾನೆ. ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ಎಂಎಸ್ಪ ಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು. ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.Read more

Terms of Use

cc logo attribution logo non-commercial logo share alike logo

Except where otherwise noted, content on this site is licensed under Attribution-NonCommercial-ShareAlike 2.5 India (CC BY-NC-SA 2.5 IN) license. Icons by The Noun Project.

  • About Us
  • How Nyaaya Works
  • Feedback
  • Disclaimer
  • Privacy Policy
  • Terms of Use
Nyaaya - India's Laws Explained
  • ವಿಭಾಗಗಳು
    • ತಾರತಮ್ಯ
      • LGBTQ+ ಆರೋಗ್ಯ
    • ಪೊಲೀಸ್ ಮತ್ತು ನ್ಯಾಯಾಲಯಗಳು
      • ಎಫ್ಐಆರ್
      • ಸಂಚಾರ ದಂಡ
    • ಮದುವೆ ಮತ್ತು ವಿಚ್ ೇದನ
      • ಅಂತರ್ ಧಾರ್ಮಿಕ ವಿವಾಹ
    • ಸರ್ಕಾರ ಮತ್ತು ರಾಜಕೀಯ
      • ಮಾಹಿತಿಯ ಹಕ್ಕು
    • ಹಣ ಮತ್ತು ಆಸ್ತಿ
      • ಬಾಡಿಗೆ
    • ಹಿಂಸೆ ಮತ್ತು ನಿಂದನೆ
      • ಆನ್‌ಲೈನ್ ನಿಂದನೆ
  • ಮುಖಪುಟ
  • English (ಆಂಗ್ಲ)
  • ಕನ್ನಡ
Nyaaya