This post is also available in: English (ಆಂಗ್ಲ)
ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಇಂತಹ ಉದ್ದೇಶಕ್ಕಾಗಿಯೇ ಮೀಸಲಾದ ಸಿಬ್ಬಂದಿಯನ್ನು ಹೊಂದಿರುತ್ತವೆ. ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡಿನ ಹಿಂಭಾಗದಲ್ಲಿ ಹಾಗೂ ಬ್ಯಾಂಕಿನ ವೆಬ್ ಸೈಟಿನಲ್ಲಿ ಈ ಸಿಬ್ಬಂದಿಯ ಸಂಪರ್ಕ ಮಾಹಿತಿ ಲಭ್ಯವಾಗುತ್ತದೆ. ಹೆಲ್ಪ್ ಡೆಸ್ಕ್ ಗಳ ದೂರವಾಣಿ ಸಂಖ್ಯೆಗಳನ್ನು ಎಟಿಎಂ ಯಂತ್ರದ ಮೇಲೆಯೂ ನಮೂದಿಸಲಾಗಿರುತ್ತದೆ. ನೀವು ಆನ್ ಲೈನ್ ವ್ಯವಹಾರಲ್ಲಿ ಹಣ ಕಳೆದುಕೊಂಡಲ್ಲಿ ತಕ್ಷಣವೇ ನಿಮ್ಮ ಬ್ಯಾಂಕನ್ನು ದೂರವಾಣಿ (ಆದ್ಯತೆ ಮೇರೆಗೆ) ಅಥವಾ ಇ-ಮೇಲ್ ಮೂಲಕ ಸಂಪರ್ಕಿಸತಕ್ಕದ್ದು. ನಿಮ್ಮ ದೂರು ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಮರೆಯಬೇಡಿ. ದೂರನ್ನು ಕುರಿತು ಯಾವುದೇ ಪತ್ರ ವ್ಯವಹಾರದಲ್ಲಿ ಈ ಸಂಖ್ಯೆಯನ್ನು ನೀವು ತಪ್ಪದೇ ನಮೂದಿಸತಕ್ಕದ್ದು. ನಿಮ್ಮ ಇ-ಮೇಲ್ ಬಂದಿರುವುದನ್ನು ಕುರಿತು ಬ್ಯಾಂಕ್ ನಿಮಗೆ ದೃಢಪಡಿಸಬೇಕು.
ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾ ಜಾರಿಗೆ ತಂದಿರುವ ಗ್ರಾಹಕ ಬದ್ಧತೆ ಸಂಹಿತೆ ಪ್ರಕಾರ ಗ್ರಾಹಕ ದೂರುಗಳನ್ನು ಪರಿಹರಿಸಲು ನಿಯುಕ್ತಿಗೊಂಡಿರುವ ಅಧಿಕಾರಿಯ ಹೆಸರನ್ನು ಬ್ಯಾಂಕಿನ ಶಾಖೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಶಾಖೆಯ ಮಟ್ಟದಲ್ಲಿ ನಿಮ್ಮ ದೂರು ಪರಿಹಾರವಾಗದಿದ್ದಲ್ಲಿ ಬ್ಯಾಂಕಿನ ರೀಜನಲ್ ಅಥವಾ ಜೋನಲ್ ಮ್ಯಾನೇಜರ್ ಅಥವಾ ಪ್ರಧಾನ ನೋಡಲ್ ಆಫೀಸರ್ ರವರನ್ನು ಶಾಖೆಯಲ್ಲಿ ಪ್ರದರ್ಶಿಸಿರುವ ವಿಳಾಸದಲ್ಲಿ ಸಂಪರ್ಕಿಸಿರಿ. ಸಾಮಾನ್ಯವಾಗಿ, ನಿಮ್ಮ ದೂರನ್ನು ಸ್ವೀಕರಿಸಿದ 30 ದಿನಗಳೊಳಗೆ ಬ್ಯಾಂಕ್ ತನ್ನ ಅಂತಿಮ ಉತ್ತರ ನೀಡುತ್ತದೆ ಅಥವಾ ದೂರನ್ನು ವಿಚಾರಣೆ ಮಾಡಲು ಹೆಚ್ಚಿನ ಕಾಲಾವಕಾಶ ಅಗತ್ಯವಿದ್ದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುತ್ತದೆ. ಬ್ಯಾಂಕಿನ ಅಂತಿಮ ಉತ್ತರ ನಿಮಗೆ ತೃಪ್ತಿದಾಯಕವಾಗಿರದಿದ್ದಲ್ಲಿ ನೀವು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಸಹ ಬ್ಯಾಂಕ್ ನಿಮಗೆ ತಿಳಿಸುತ್ತದೆ.
1
Leave a Comment