This post is also available in: English (ಆಂಗ್ಲ)
ಗ್ರಾಹಕರ ದೂರು ಪರಿಹಾರ ವೇದಿಕೆಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಎರಡು ಅಂಶಗಳ ಆಧಾರದ ಮೇಲೆ ನೀವು ಈ ವೇದಿಕೆಗಳಿಗೆ ದೂರು ಸಲ್ಲಿಸಬಹುದಾಗಿದೆ.
1.ನೀವು ಕಳೆದುಕೊಂಡ ಹಣದ ಮೊತ್ತ:
- ಜಿಲ್ಲಾ ವೇದಿಕೆ: ರೂ.20 ಲಕ್ಷದವರೆಗೆ
- ರಾಜ್ಯ ಆಯೋಗ: ರೂ. 20 ಲಕ್ಷದಿಂದ ರೂ. 1 ಕೋಟಿ
- ರಾಷ್ಟ್ರೀಯ ಆಯೋಗ: ರೂ. 1 ಕೋಟಿಗೂ ಮೇಲ್ಪಟ್ಟು
2.ನೀವು ಹಣ ಕಳೆದುಕೊಂಡ ಸ್ಥಳ:
- ಹಣವನ್ನು ಕಳೆದುಕೊಂಡ ಸ್ಥಳದಲ್ಲಿ ಅಥವಾ ಎದುರುದಾರರು (ಎಂದರೆ, ಬ್ಯಾಂಕ್) ತನ್ನ ವ್ಯವಹಾರವನ್ನು ನಡೆಸುವ ಸ್ಥಳದಲ್ಲಿ ನೀವು ದೂರನ್ನು ಸಲ್ಲಿಸಬಹುದು.
ಬ್ಯಾಂಕು ಉದಾಸೀನತೆಯಿಂದ ವರ್ತಿಸಿದೆ ಅಥವಾ ನಿಮಗೆ ಸೂಕ್ತ ಸೇವೆಯನ್ನು ಒದಗಿಸಿಲ್ಲ ಎಂದು ನಿಮಗೆ ಮನದಟ್ಟಾದಾಗ ಮಾತ್ರ ನೀವು ಗ್ರಾಹಕರ ದೂರು ಪರಿಹಾರ ವೇದಿಕೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಈ ವೇದಿಕಯು ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಿಲ್ಲ. ಸಾಮಾನ್ಯವಾಗಿ ಗ್ರಾಹಕರ ದೂರು ಪರಿಹಾರ ವೇದಿಕೆ ಮತ್ತು ಬ್ಯಾಂಕಿಂಗ್ ಒಂಬಡ್ಸ್ ಮನ್ ಮುಂದೆ ಏಕಕಾಲಕ್ಕೆ ದೂರು ಸಲ್ಲಿಸಲಾಗುವುದಿಲ್ಲ.
1
Leave a Comment