This post is also available in: English (ಆಂಗ್ಲ)
ನಿಮ್ಮ ಮಾಹಿತಿ ಹಕ್ಕು ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯು ವಿಲೇ ಮಾಡಿದ ರೀತಿ ಕುರಿತು ನಿಮ್ಮ ಯಾವುದೇ ದೂರುಗಳನ್ನು ಈ ಕಾಯ್ದೆ ಅಡಿಯಲ್ಲಿ ಸ್ಥಾಪಿಸಲಾಗಿರುವ ಮೇಲ್ಮನವಿ ಪ್ರಾಧಿಕಾರಗಳು – ರಾಜ್ಯ ಮಾಹಿತಿ ಆಯೋಗ ಅಥವಾ ಕೇಂದ್ರ ಮಾಹಿತಿ ಆಯೋಗಕ್ಕೆ – ಸಲ್ಲಿಸಬಹುದಾಗಿದೆ. ಈ ಕೆಳಕಂಡ ಸನ್ನಿವೇಶಗಳಲ್ಲಿ ಇಂತಹ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ.
ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ನೀಡಲು ನಿರಾಕರಿಸಿದಾಗ;
ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀವು ಕೋರಿದ ಮಾಹಿತಿಯನ್ನು ನಿರ್ದಿಷ್ಟಪಡಿಸಿದ ಸಮಯದಲ್ಲಿ ಒದಗಿಸದಿದ್ದಲ್ಲಿ;
ನಿಮಗೆ ಮಾಹಿತಿ ಒದಗಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಯು ಅತಿ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಇಟ್ಟಲ್ಲಿ; ಮತ್ತು
ಸಾರ್ವಜನಿಕ ಮಾಹಿತಿ ಅಧಿಕಾರಿಯು ನಿಮಗೆ ಅಪೂರ್ಣ ಅಥವಾ ತಪ್ಪು ಮಾಹಿತಿಯನ್ನು ಒದಗಿಸಿದಲ್ಲಿ.
ನಿಮ್ಮ ಅರ್ಜಿಯಲ್ಲಿ ಪರಿಗಣಿಸಬಹುದಾದ ಅಂಶಗಳಿವೆ ಎಂದು ಆಯೋಗಕ್ಕೆ ಮನವರಿಕೆಯಾದಲ್ಲಿ, ಅದು ಆ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಪ್ರಾರಂಭಿಸತಕ್ಕದ್ದು. ಈ ರೀತಿಯ ವಿಚಾರಣೆಯ ಉದ್ದೇಶಕ್ಕಾಗಿ, ಆಯೋಗವು ಸಿವಿಲ್ ನ್ಯಾಯಾಲಯದಷ್ಟೇ ಅಧಿಕಾರಗಳನ್ನು ಹೊಂದಿರುತ್ತದೆ. ಎಂದರೆ, ಸಾಕ್ಷಿ ನೀಡುವ ಉದ್ದೇಶಕ್ಕಾಗಿ ಹಾಜರಾಗುವಂತೆ ಅಥವಾ ಸಾಕ್ಷಾಧಾರಗಳನ್ನು ಒದಗಿಸುವಂತೆ ಪಕ್ಷಗಾರರಿಗೆ ನಿರ್ದೇಶನ ನೀಡಬಹುದು ಮತ್ತು ಹಾಗೆ ಒದಗಿಸಿದ ದಾಖಲೆಗಳನ್ನು ಪರಿವೀಕ್ಷಿಸಬಹುದು ಮತ್ತು ಯಾವುದೇ ಸಾರ್ವಜನಿಕ ದಾಖಲೆಗಳನ್ನು ಹಾಜರು ಮಾಡುವಂತೆ ಆದೇಶ ನೀಡುವ ಅಧಿಕಾರಗಳನ್ನು ಹೊಂದಿರುತ್ತದೆ.
1
Leave a Comment