ಬಹಳಷ್ಟು ಸೆಲೆಬ್ರಿಟಿಗಳು ಆನ್‌ಲೈನ್‌ನಲ್ಲಿ ಈ ರೀತಿಯ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಇದು ಅಪರಾಧ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ದೈಹಿಕ ಹಾನಿಯ ಬೆದರಿಕೆಗಳು

ಕೊನೆಯ ಅಪ್ಡೇಟ್ Jul 22, 2022

ದೈಹಿಕ ಹಾನಿ ಉಂಟುಮಾಡುವುದಾಗಿ ಅಥವಾ ದೌರ್ಜನ್ಯ ಎಸಗುವುದಾಗಿ ಅಂತರ್ಜಾಲದದಲ್ಲಿ ಬೆದರಿಕೆ ಹಾಕುವುದು ಭಯ ಸೃಷ್ಟಿಸುವ ಕೃತ್ಯವಾಗಿದ್ದು, ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಫೇಸ್ ಬುಕ್ ನಲ್ಲಿ ಯಾವುದೇ ವ್ಯಕ್ತಿ ನಿಮ್ಮನ್ನು ಥಳಿಸುವುದಾಗಿ ಮೆಸೇಜ್ ಹಾಕಿದಲ್ಲಿ, ಆ ಕೃತ್ಯವನ್ನು ದೈಹಿಕವಾಗಿ ಘಾಸಿಗೊಳಿಸುವ ಬೆದರಿಕೆ ಎಂದು ಪರಿಗಣಿಸಲಾಗುತ್ತದೆ. ಈ ಬೆದರಿಕೆಗೆ ಸಂಬಂಧಿಸಿದಂತೆ ನೀವು ಸಕ್ಷಮ ಅಧಿಕಾರಿಗಳಿಗೆ ದೂರನ್ನು ನೀಡಬಹುದಾಗಿದೆ.

ಕಾನೂನಿನ ಪರಿಭಾಷೆಯಲ್ಲಿ ಈ ಕೃತ್ಯವನ್ನು “ಅಪರಾಧಿಕ ಭಯೋತ್ಪಾದನೆ” ಎಂದು ಕರೆಯಲಾಗುತ್ತದೆ. ಈ ಅಪರಾಧಕ್ಕಾಗಿ ಎರಡು ವರ್ಷಗಳವರೆಗಿನ ಕಾರಾಗೃಹ ವಾಸ ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳ ಶಿಕ್ಷೆ ನೀಡಲು ಅವಕಾಶವಿದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.